Skip to main content


ಜೋಕೆ.! ಇದು ರಿಮಿಕ್ಸ್ ಅಲ್ಲಾ, ರಿಯಲ್ ಹಾಡು..

ಇತ್ತೀಚಿಗಷ್ಟೆ ಬಿಡುಗಡೆಯಾದ 'ಕೆ.ಜಿ.ಎಫ್' ಚಿತ್ರದ ಒಂದು ಹಾಡಿನ ಪೋಸ್ಟರ್ ಸಾಕಷ್ಟು ಸದ್ದು ಮಾಡಿತ್ತು. ಬಹುನಿರೀಕ್ಷಿತ ಈ ಚಿತ್ರದಲ್ಲಿ ವರನಟ ಡಾ.ರಾಜ್‌ ಕುಮಾರ್ ಅಭಿನಯದ 70 ರ ಗೋಲ್ಡನ್ ಸಿನಿಮಾ 'ಪರೋಪಕಾರಿ'ಯ ಹಿಟ್ ಹಾಡನ್ನು ಬಳಸಿಕೊಳ್ಳಲಾಗಿದೆ. ಈ ಹಾಡಿಗೆ ಯಶ್ ಹಾಗೂ ಬಹುಭಾಷಾ ನಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದು ಆಗಿದೆ. ಹಾಡಿನ ಚಿತ್ರೀಕರಣವನ್ನು ಚಂದದ ಸೆಟ್ ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ತುಂಬಾ ಜನ 'ಕೆಜಿಎಫ್'ನಲ್ಲಿ ಈ ಹಾಡನ್ನ ರಿಮಿಕ್ಸ್ ಮಾಡಿ ಬಳಸಲಾಗಿದೆ ಅಂದಿದ್ದರು. ಆದರೆ ಸಿನಿಮಾದಲ್ಲಿ ಬಳಸಿರುವ ಈ ಹಾಡನ್ನು ರಿಮಿಕ್ಸ್ ಮಾಡಿಲ್ಲ, 70 ರ ದಶಕದಲ್ಲಿ ಆರ್ ಎನ್ ಜಯಗೋಪಾಲ್ ಬರೆದು, ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ ಎಲ್ ಆರ್ ಈಶ್ವರಿ ಅವರು ಹಾಡಿದ್ದ ಅದೇ ಹಾಡನ್ನು ಯತಾವತ್ತಾಗಿ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಅದೇ ಹಾಡಿಗೆ ತಮನ್ನಾ ಸೊಂಟ ಬಳುಕಿಸಿದ್ದಾರೆ.  

short by Pawan / more at Balkani News

Comments