Skip to main content


ಶ್ರುತಿ-ರಾಮ್ ಪ್ರೇಮಗೀತೆ

ನೃತ್ಯ ನಿರ್ದೇಶಕ ರಾಮ್‌ಕುಮಾರ್ ಮತ್ತು ನಟಿ ಶ್ರುತಿ ಹರಿಹರನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈಗ ಅವರ ಖುಷಿಯನ್ನು ಇಮ್ಮಡಿಗೊಳಿಸುವ ಮಾಹಿತಿ ಕೇಳಿಬಂದಿದೆ. ನಿಜಜೀವನದಲ್ಲಿ ಪ್ರೇಮಿಗಳಾಗಿರುವ ಶ್ರುತಿ-ರಾಮ್ ಜತೆಯಾಗಿ ನಟಿಸುತ್ತಿದ್ದಾರೆ. ಹಾಗಂತ ಅವರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರುತ್ತಿದೆ ಎಂದುಕೊಳ್ಳುವಂತಿಲ್ಲ. ಅವರಿಬ್ಬರೂ ಜತೆಯಾಗಿ ತೆರೆ ಹಂಚಿಕೊಂಡಿರುವುದು ಮ್ಯೂಸಿಕ್ ವಿಡಿಯೋ ಸಲುವಾಗಿ. ‘ಪ್ರೇಮ’ ಶೀರ್ಷಿಕೆಯ ಈ ಗೀತೆಗೆ ಗೊಮ್ಮಟೇಶ್ ಉಪಾಧ್ಯ ಆಕ್ಷನ್-ಕಟ್ ಹೇಳಿದ್ದಾರೆ. ‘ನಾನು ಲೂಸಿಯಾ ಸಿನಿಮಾ ಮಾಡುವ ಸಮಯದಿಂದಲೂ ಗೊಮ್ಮಟೇಶ್ ಪರಿಚಯ. ಈ ಹಿಂದೆ ಅವರು ‘ನೀನೇ..’ ಎಂಬ ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅವರ ಜತೆ ಕೆಲಸ ಮಾಡುವ ಹಂಬಲ ಮೊದಲಿನಿಂದಲೂ ಇತ್ತು. ‘ಪ್ರೇಮ’ ಮೂಲಕ ಅದಕ್ಕೆ ಕಾಲ ಕೂಡಿಬಂತು’ ಎನ್ನುತ್ತಾರೆ ಶ್ರುತಿ.    

short by Pawan / more at Vijayavani

Comments