Skip to main content


ಸಾಯಿ ಪಲ್ಲವಿಗೆ ಪೈಪೋಟಿ ನೀಡುತ್ತಿದ್ದಾರಾ ರಶ್ಮಿಕಾ?

ಹೌದು, ಚಲೋ ಹಾಗೂ ಗೀತ ಗೋವಿಂದಂ ಚಿತ್ರಗಳು ಸಕ್ಸಸ್​ ಆಗಿದ್ದೇ ತಡ, ಕಿರಿಕ್ ಬೆಡಗಿ ರಶ್ಮಿಕಾ ಟಾಪ್ ನಟಿಯಂತಾದ್ರು. ಇದರ ಜತೆಗೆ ಅವರ ಸಂಭಾವನೆಯೂ ಹೆಚ್ಚಾಯಿತು. ಸಾಕಷ್ಟು ಚಿತ್ರಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ. ಅವರ ಈ ಬೆಳವಣೆಗೆ ಟಾಲಿವುಟ್​ನಲ್ಲಿ ಗಟ್ಟಿ ನೆಲೆ ಹೊಂದಿರುವ ನಟಿ ಸಾಯಿ ಪಲ್ಲವಿಗೆ ಪೈಪೋಟಿ ನೀಡುತ್ತಿದೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. 
ಫಿದಾ ಹಾಗೂ ಎಂಸಿಎ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದ ಸಾಯಿ, ಟಾಪ್ ನಟಿಯರ ಸಾಲಿನಲ್ಲಿದ್ದಾರೆ. ಸದ್ಯ ಅವರೂ ಕೂಡ ಕೆಲ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರಿಗೆ ಹೋಲಿಸಿದ್ರೆ ರಶ್ಮಿಕಾ ಮಂದಣ್ಣ ಅವರಿಗೆ ಅವಕಾಶಗಳು ಜಾಸ್ತಿ ಸಿಗುತ್ತಿವೆಯಂತೆ. ಕಥೆ ಇಷ್ಟವಾದರೆ ಸಾಕು, ಯಾವುದೇ ನಟನ ಜತೆ ನಟಿಸಲು ರಶ್ಮಿಕಾ ಒಪ್ಪಿಕೊಳ್ಳುತ್ತಾರಂತೆ. ಇದು ಅವರಿಗೆ ಆಫರ್​ಗಳನ್ನು ತಂದುಕೊಡುವಲ್ಲಿ ಸಾಕಷ್ಟು ಸಹಾಯಕಾರಿಯಾಗುತ್ತಿದೆಯಂತೆ. ಇದರಿಂದ ಈ ನಟಿಯರ ನಡುವೆ ಪೈಪೋಟಿ ಶುರುವಾಗಿದೆ ಎನ್ನಲಾಗುತ್ತಿದೆ.     

short by Pawan!

Comments