Skip to main content


ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ತಮಿಳು ಸ್ಟಾರ್ ನಟ.!

ಪರಭಾಷೆ ನಟ-ನಟಿಯರು ಕನ್ನಡಕ್ಕೆ ಬರೋದು ಕಾಮನ್ ಆಗಿದೆ. ಇತ್ತೀಚಿನ ಚಿತ್ರಗಳಲ್ಲಿ ಒಬ್ಬರಲ್ಲ ಒಬ್ಬರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾನೆ ಇದ್ದಾರೆ. ಇದೀಗ, ತಮಿಳಿನ ಯುವ ಸ್ಟಾರ್ ನಟನೊಬ್ಬ ಚಂದನವನಕ್ಕೆ ಕಾಲಿಡುತ್ತಿದ್ದಾರೆ. 'ಬಾಯ್ಸ್', 'ಕಾದಲ್', 'ವೇಯಿಲ್' ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಭರತ್ ಈಗ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಡಾ ರಾಜ್ ಕುಮಾರ್ ಕುಟುಂಬದ ಸಂಬಂಧಿ ಸೂರಜ್ ಅಭಿನಯಿಸಲಿರುವ ಚೊಚ್ಚಲ ಸಿನಿಮಾದಲ್ಲಿ ಭರತ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ವಿಶೇಷ ಪಾತ್ರಕ್ಕಾಗಿ ಭರತ್ ಅವರನ್ನ ಕರೆತರುವ ಸಿದ್ಧತೆ ನಡೆದಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ಆಗಿದ್ದು, ಅಭಿನಯಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.  

short by Pawan / more at Filmibeat

Comments