Skip to main content


ನಟ ದರ್ಶನ್​ ಈಗ ಸ್ಯಾಂಡಲ್​ವುಡ್​ನಲ್ಲಿ ಒಡೆಯ

ದಚ್ಚು ಈಗ ಸಿಕ್ಕಾಪಟ್ಟೆ ಬ್ಯುಸಿ. ಅವರ ಕುರುಕ್ಷೇತ್ರ ಚಿತ್ರದ ಬಿಡುಗಡೆಯ ಮುನ್ನವೆ 51 ನೇ ಚಿತ್ರ 'ಯಜಮಾನ' ಶೂಟಿಂಗ್ ಮುಗಿಸಿಕೊಂಡಿದೆ. ಈ ನಡುವೆ 52 ನೇಯ ಚಿತ್ರ 'ಒಡೆಯ'ನ ಚಿತ್ರೀಕರಣ ಕೂಡ ಇದೇ 16 ರಂದು ಪ್ರಾರಂಭವಾಗಲಿದೆ. ಇದು ತಮಿಳಿನ 'ವೀರಂ' ಚಿತ್ರದ ರೀಮೇಕ್ ಆಗಿದ್ದು, ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಇನ್ನು ಈ ಮೊದಲು ಚಿತ್ರಕ್ಕೆ 'ಒಡೆಯರ್' ಎನ್ನುವ ಹೆಸರಿಡಲಾಗಿತ್ತು. ಆದರೆ, ಅದು ಮೈಸೂರಿನ ರಾಜಮನೆತನದವರ ಹೆಸರಾಗಿದ್ದರಿಂದ, ಅದು ಬೇಡ ಎಂದು ಕೆಲ ಸಂಘಟನೆಗಳು ದೂರಿದ್ದವು. ಇನ್ನು ಖುದ್ದು ರಾಜಮಾತೆ ಪ್ರಮೋದಾದೇವಿ ಚಿತ್ರಕ್ಕೆ 'ಒಡೆಯರ್' ಎಂಬ ಹೆಸರಿಡುವುದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದರು. ಹಾಗೆಯೇ, ಮೈಸೂರಿನ ರಾಜಮನೆತನಕ್ಕೆ ಕುಂದು ಬರುವಂತೆ ಏನೂ ತೋರಿಸಬಾರದು ಎಂದು ಸೂಚಿಸಿದ್ದರು. ಕೊನೆಗೆ 'ಒಡೆಯರ್' ಹೆಸರಿಗೆ ಹಲವು ಸಂಘಟನೆಗಳ ವಿರೋಧ ಹೆಚ್ಚಾದ ಕಾರಣ ಅಂತಿಮವಾಗಿ 'ಒಡೆಯ' ಎನ್ನುವ ಹೆಸರು ಫೈನಲ್ ಆಗಿದೆ.   

short by Pawan / more at Eenadu India

Comments