Skip to main content


ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಭಿನ್ನ ಮತ ಸ್ಪೋಟ

ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರೆದ ಹೆಚ್.ಡಿಕೆ-ಸಿದ್ದು ನಡುವೆ ಜಟಾಪಟಿ ಮುಂದುವರೆದಿದೆ. ಇವೆಲ್ಲದರ ನಡುವೆ ಸಮ್ಮಿಶ್ರ ಸರ್ಕಾರ ಸರಿಯಾಗಿ ನಡೆದು ಹೋಗುವ ನಿಟ್ಟಿನಲ್ಲಿ ರಚನೆಯಾಗಿದ್ದ ಸಮನ್ವಯ ಸಮಿತಿಗೆ ದಿನಾಂಕವನ್ನು ಸಿದ್ದರಾಮಯ್ಯ ಅವರು ನಿಗದಿ ಮಾಡುತ್ತಿದ್ದರು ಕೂಡ ಕೆಲಸದ ಒತ್ತಡದ ಕಾರಣ ನೀಡಿ ಸಿಎಂ ಹೆಚ್.ಡಿಕೆ ಸಭೆಯಲ್ಲಿ ಭಾಗವಹಿಸುವುದಕ್ಕೆ ಮುಂದಾಗುತ್ತಿಲ್ಲ ಅಂತ ಹೇಳಲಾಗುತ್ತಿದೆ. ಇದಲ್ಲದೇ ಅನೇಕೆ ವಿಷಯಗಳಲ್ಲಿ ಸೂಪರ್‍ ಸಿಎಂ ಅಂತ ಕರೆಸಿಕೊಳ್ಳುತ್ತಿರುವ ಸಚಿವ ಹೆಚ್.ಡಿಕೆ ಕೆಲ ಅಧಿಕಾರಿಗಳ ವಿಷಯದಲ್ಲೂ ಕೂಡ ಸುಮ್ಮನೆ ತಲೆ ಹಾಕುತ್ತಿದ್ದು, ಇದು ಹಾಲಿ ಶಾಸಕರು, ಸಚಿವರು, ಹಾಗೂ ಆಯಾ ಜಿಲ್ಲೆಯ ಕಾಂಗ್ರೆಸ್ ನಾಯಕರುಗಳಿಗೆ ದೊಡ್ಡ ತಲೆನೋವಾಗಿದ್ದು, ಈ ಬಗ್ಗೆ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯರಿಗೆ ಅನೇಕರು ದೂರು ನೀಡಿದ್ದಾರೆ ಎನ್ನಲಾಗಿದೆ.   

short by Pawan / more at Kannada News Now

Comments