Skip to main content


ದಿ ವಿಲನ್ ನಲ್ಲಿ ಒಬ್ಬೊಬ್ಬರದು ಒಂದೊಂದು ಅವತಾರ..!!!

ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ 'ದಿ ವಿಲನ್' ಚಿತ್ರದ ಮತ್ತೊಂದು ಪೊಸ್ಟರ್ ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗುತ್ತಿವೆ. ಸುದೀಪ್, ಶಿವಣ್ಣ ಇಬ್ಬರೂ ತುಂಬಾ ಭಿನ್ನವಾಗಿ ಕಾಣಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ನಲ್ಲಿ ನಟ ಕಿಚ್ಚ ಸುದೀಪ್ , ತಲೆಗೆ ಟೋಪಿ ಧರಿಸಿ, ಉದ್ದ ಕೂದಲು ಬಿಟ್ಟು ಕಪ್ಪು ಉಡುಪು ತೊಟ್ಟುಕೊಂಡು ವಿಭಿನ್ನವಾಗಿ ಮಿಂಚುತ್ತಿದ್ದು, ನಾಯಕಿ ಆಯಮಿ ಜಾಕ್ಸನ್ ಕೈಯಲ್ಲಿ ಸಿಗರೇಟ್ ಹಿಡಿದು, ಬ್ಲ್ಯಾಕ್ ಗೌನ್ ತೊಟ್ಟು ಪಡ್ಡೆ ಹೈಕಳ ಮೈ ಚಳಿ ಹೆಚ್ಚಿಸಿದ್ದಾರೆ. ನಟ ಶಿವಣ್ಣ ತಲೆಗೆ ಪೇಟ ತೊಟ್ಟು , ಹಸಿರು ಪಂಚೆ, ಗುಲಾಬಿ ಕೋಟು ಧರಿಸಿ ಪಕ್ಕಾ ದೇಸಿ ನೋಟದಲ್ಲಿ ಕಾಣುತ್ತಿದ್ದಾರೆ.   

short by Pawan / more at Balkani News

Comments