Skip to main content


ಕರ್ನಾಟಕಕ್ಕೆ ಬಂದಮೇಲೆ ಕನ್ನಡ ಕಲಿತು ಮಾತನಾಡಬೇಕು ಎಂದು ಕನ್ನಡ ಬಂದರೂ ಮಾತನಾಡದ ನಟಿಯರಿಗೆ ಟಾಂಗ್ ಕೊಟ್ಟ ಪರಭಾಷಾ ನಟಿ 

ಕನ್ನಡ ಚಿತ್ರರಂಗದಲ್ಲಿ ಮೊದಲ ಚಿತ್ರ ಮಾಡಿ ಯಶಸ್ಸು ಕಂಡ ನಂತರ ಬೇರೆ ಚಿತ್ರರಂಗಗಳಿಗೆ ಹೋಗಿ ಸ್ಟಾರ್ ಆಗಿರುವ ನಟಿಯರು ಅನೇಕರು ಇದ್ದಾರೆ. ಕರ್ನಾಟಕದಲ್ಲೇ ಹುಟ್ಟಿ ಬೆಳೆದು ಕನ್ನಡ ಚಿತ್ರದಲ್ಲಿ ಅಭಿನಯಿಸಿ ಸ್ಟಾರ್ ಗಿರಿ ಪಡೆದುಕೊಂಡರೂ ಸಹ ಚಿತ್ರದ ಸಕ್ಸಸ್ ಮೀಟ್ ಗೆ ಬಂದಾಗ ಕೆಲ ನಟಿಯರು ಕನ್ನಡ ಬಂದರೂ ಸಹ “ಐ ಡೋಂಟ್ ನೋ ಕನ್ನಡ” ಎಂದು ಇಂಗ್ಲಿಷ್ನಲ್ಲಿ ಹೇಳಿ ಮಾತನ್ನು ಆರಂಭಿಸಿದ್ದನ್ನು ನೀವೇ ನೋಡಿದ್ದೀರಾ. ಇದಕ್ಕೆ ಹಲವಾರು ಉದಾಹರಣೆಗಳು ಈಗಾಗಲೇ ನಿಮಗೆ ತಿಳಿದಿವೆ. ಆದರೆ ಪಾರ್ವತಿ ಮೆನನ್ ಎಂಬ ಮಲಯಾಳಂ ನಟಿ ಖಾಸಗಿ ವಾಹಿನಿಯೊಂದರ ಸಂದರ್ಶನದ ವೇಳೆ ಈ ಹಿಂದೆ ಮಾತನಾಡಿದ್ದರು. ಆ ಸಂದರ್ಶನದಲ್ಲಿ ಅವರು ಕನ್ನಡದ ಮೇಲಿರುವ ಪ್ರೀತಿ ಮತ್ತು ಕನ್ನಡ ಬಂದರೂ ಸಹ ಮಾತನಾಡಲು ಹಿಂಜರಿಯುವ ಕೆಲ ನಟಿಯರಿಗೆ ಹಿಗ್ಗಾಮುಗ್ಗಾ  ಕಾಳೆಯುವುದರ ಮೂಲಕ ಕನ್ನಡ ಮಾತನಾಡುವಂತೆ ಬೈದಿದ್ದಾರೆ.   

short by Pawan / more at Troll haida

Comments