Skip to main content


ಡಿಪ್ರೆಷನ್ ನಿಂದ ಮೇಲೆದ್ದು ಗೆದ್ದ ಹಾಸ್ಯನಟ

ಕನ್ನಡದಲ್ಲಿ ಭರವಸೆಯ ಕಾಮಿಡಿ ನಟರು ಸಾಕಷ್ಟಿದ್ದಾರೆ. ಎಲ್ಲರನ್ನು ನಗಿಸುತ್ತಲೇ ಇರುವ ಇವರು ಈಗಿರುವ ಸ್ಥಾನಕ್ಕೆ ಏರಲು ಪಟ್ಟಿರುವ ಪಾಡು, ಹಾಕಿರುವ ಶ್ರಮ ಅಗಣಿತ. ಚಿಕ್ಕ ಚಿಕ್ಕ ಅವಕಾಶಗಳನ್ನೇ ಮೆಟ್ಟಿಲುಗಳಾಗಿ ಬಳಸಿಕೊಂಡು ದೊಡ್ಡ ಅವಕಾಶದತ್ತ ಸಾಗುತ್ತಿರುವ ಕನ್ನಡದ ಭರವಸೆಯ ನಟರ ಸಾಲಿನಲ್ಲಿ ನಿಲ್ಲುವವರು ಪವನ್. ನಾಟಕ, ಧಾರಾವಾಹಿ, ಚಲನಚಿತ್ರಗಳಲ್ಲಿ ನಟಿಸುತ್ತಾ ಬಂದಿರುವ ಪವನ್ ಅವರ ಬಣ್ಣದ ಬದುಕಿನ ಕಥಾನಕವಿದು. ಇವರ ಮೂರ್ತಿ ಚಿಕ್ಕದಾದರೂ ಪ್ರತಿಭೆ ದೊಡ್ಡದು. ರಂಗಭೂಮಿಯಲ್ಲಿ ಎರಡು ದಶಕಗಳ ಕಾಲ ದುಡಿದು ಮಜಾ ಟಾಕೀಸ್, ಮಜಾ ವೀಕೆಂಡ್‌ಗಳಲ್ಲಿ ಎಲ್ಲರನ್ನೂ ನಕ್ಕು ನಗಿಸುತ್ತಿರುವುದರ ಜೊತೆಗೆ ಕಂಠಿ, ಆಕಾಶ್ ರೀತಿಯ ಹಿಟ್ ಚಿತ್ರಗಳಿಗೂ ಬಣ್ಣ ಹಚ್ಚಿದ್ದ ನಟ ಪವನ್ ಸಾಗಿ ಬಂದ ಹಾದಿ ಸಾಕಷ್ಟು ಕಠಿಣವಾದ್ದದ್ದು, ಟಿ.ಎಸ್. ನಾಗಾಭರಣ, ಬಿ.ವಿ. ಕಾರಂತರ ಗರಡಿಯಲ್ಲಿ ಬೆಳೆದ ಪವನ್ ಬೆನಕ ಸೇರಿಂದಂತೆ ಹಲವಾರು ನಾಟಕ ತಂಡಗಳಲ್ಲಿ ಇಂದಿಗೂ ಸಕ್ರಿಯ.     

short by Pawan / more at Suvarna News

Comments