Skip to main content


ಬಿಗ್​ ಬಜೆಟ್​ ಚಿತ್ರಗಳು​​... ಕುರುಕ್ಷೇತ್ರ, ದಿ ವಿಲನ್​​, ಕೆಜಿಎಫ್​ಗಳಿಗೆ ಖರ್ಚಾಗಿದ್ದು ಎಷ್ಟು ಕೋಟಿ?

ಚಾಲೆಂಜಿಂಗ್ ಸ್ಟಾರ್​ ದರ್ಶನ್​ ನಟನೆಯ ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಮೂಲಗಳ ಪ್ರಕಾರ 200 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರಗಳು ಸಿದ್ಧವಾಗಿವೆಯಂತೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್, ಅಂಬರೀಶ್​, ಅರ್ಜುನ್ ಸರ್ಜಾ, ವಿ.ರವಿಚಂದ್ರನ್​, ನಿಖಿಲ್ ಗೌಡ್​, ಮೇಘನಾ ರಾಜ್​, ಭಾರತಿ ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚತ್ರರಂಗದ ಸಾಕಷ್ಟು ಸ್ಟಾರ್ ನಟರುಗಳು ನಟಿಸಿಸಿದ್ದಾರೆ. ಹೈದರಾಬಾದ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಈ ಚಿತ್ರಕ್ಕೆ ಶೂಟಿಂಗ್ ನಡೆದಿದ್ದು, ಮೂಲಗಳ ಪ್ರಕಾರ ಈ ಚಿತ್ರಕ್ಕೆ ಬರೋಬ್ಬರಿ 75 ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಈ ಚಿತ್ರವನ್ನು ಮುನಿರತ್ನ ಅವರು ನಿರ್ಮಿಸುತ್ತಿದ್ದಾರೆ. ಇನ್ನು ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರವೂ ಕೂಡ ಬಿಗ್ ಬಜೆಟ್​ನಲ್ಲಿ ರೆಡಿಯಾಗಿದೆಯಂತೆ. ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ಮೂಡಿ ಬಂದಿದೆ ಎನ್ನಲಾಗುತ್ತಿದೆ. ಕೊನೆಯದಾಗಿ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್​ ಬಿಡುಗಡೆಯ ಮುನ್ನವೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಸತತ ಎರಡು ವರ್ಷಗಳ ಸುದೀರ್ಘ ಶೂಟಿಂಗ್ ಮುಗಿಸಿರುವ ಈ ಚಿತ್ರಕ್ಕೆ 80 ಕೋಟಿ ರೂ. ಖರ್ಚಾಗಿದೆಯಂತೆ.      

short by Pawan / more at Eenadu India

Comments