Skip to main content


ಶಿವಣ್ಣನಿಗೆ ಕಣ್ಣು ಹಾಕಿದ ಆರು ಜನ ನಾಯಕಿಯರು…!!!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರವು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಈಗ ಈ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಈ ಚಿತ್ರದಲ್ಲಿ ನಾಯಕ ಶಿವಣ್ಣನೊಂದಿಗೆ ನಾಯಕಿ ಆ್ಯಮಿಯೊಂದಿಗೆ ಒಟ್ಟು ಆರು ಜನ ನಾಯಕಿಯರು ಹೆಜ್ಜೆ ಹಾಕುತ್ತಿದ್ದಾರೆ. ಈಗಾಗಲೇ ಈ ಹಾಡಿನ ಚಿತ್ರೀಕರಣ ಮುಗಿದಿದ್ದು, ಈ ಹಾಡಿನಲ್ಲಿ ಶಿವಣ್ಣನೊಂದಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್, ಶಾನ್ವಿ ಶ್ರೀವಾತ್ಸವ, ಸಂಯುಕ್ತ ಹೊರನಾಡು, ರಾಧಿಕಾ ಚೇತನ್ ಹಾಗೂ ಯು ಟರ್ನ್ ಶ್ರದ್ಧಾ ಶ್ರೀನಾಥ್ ಹೆಜ್ಜೆ ಹಾಕಿದ್ದಾರೆ. ಚಿತ್ರದ ಹಾಡಿನಲ್ಲಿ ನಾಯಕನಿಗೆ ಹುಡುಗಿ ಹುಡುಕಾಟ ನಡೆಯುತ್ತಿರುತ್ತದೆ, ಯಾವ ಊರಿನ ಹುಡುಗಿ ಬೇಕು ಎಂಬಸಾಲು ಇಲ್ಲಿದ್ದು, ಇದರಲ್ಲಿ ಈ ಎಲ್ಲ ನಾಯಕಿಯರು ಬಂದು ಹೋಗಲಿದ್ದಾರೆ. ಮತ್ತು ಈ ಹಾಡು ಹಳ್ಳಿ ಸೊಗಡಿನಲ್ಲಿ ಮೂಡಿ ಬರಲಿದೆ.  

short by Pawan / more at Balkani News

Comments