Skip to main content


ಡಬ್ಬಿಂಗ್ ಸಿನಿಮಾವನ್ನು ಒಪ್ಪಿಕೊಂಡ ಕರವೇ ಉಪಾಧ್ಯಕ್ಷ

ಡಬ್ಬಿಂಗ್ ಎನ್ನುವುದು ಕನ್ನಡದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಈಗ ಮತ್ತೊಂದು ಡಬ್ಬಿಂಗ್ ಸಿನಿಮಾ ಬಿಡುಗಡೆಯಾಗುತ್ತಿದೆ. 'ಕಮಾಂಡೋ' ಚಿತ್ರ ಇದೇ ತಿಂಗಳ 31 ರಂದು ರಿಲೀಸ್ ಆಗುತ್ತಿದೆ. ಇದೀಗ ಡಬ್ಬಿಂಗ್ ಸಿನಿಮಾಗೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲ ಸಿಕ್ಕಿದೆ. ಕರವೇ ಉಪಾಧ್ಯಕ್ಷ ಅಂಜನ ಗೌಡ 'ಕಮಾಂಡೋ' ಚಿತ್ರಕ್ಕೆ ತಮ್ಮ ಸಾಥ್ ನೀಡಿದ್ದಾರೆ. 'ಕಮಾಂಡೋ' ಸಿನಿಮಾ ತಮಿಳಿನ ನಟ ಅಜಿತ್ ಅಭಿನಯದ 'ವಿವೇಗಂ' ಸಿನಿಮಾದ ಕನ್ನಡ ರೂಪಾವಾಗಿದೆ. ಅಂದಹಾಗೆ, ಇತ್ತೀಚಿಗಷ್ಟೆ 'ಕಮಾಂಡೋ' ಸಿನಿಮಾದ ಆಡಿಯೋ ಬಿಡುಗಡೆಯ ಕಾರ್ಯಕ್ರಮ ನಡೆಯಿತು. ಈ ವೇಳೆ ಈ ಚಿತ್ರಕ್ಕೆ ತಮ್ಮ ಸಮ್ಮತಿ ಇದೆ ಎಂದು ಕರವೇ ಉಪಾಧ್ಯಕ್ಷ ಅಂಜನ ಗೌಡ ತಿಳಿಸಿದ್ದಾರೆ.    

short by Pawan / more at Filmibeat

Comments