Skip to main content


ಕೊಡಗು ಜನತೆಯ ನೆರವಿಗೆ ನಿಂತ ಡಿ-ಬಾಸ್ ಮತ್ತು ಕಿಚ್ಚ ಸುದೀಪ್

ಕೊಡಗು ಜಿಲ್ಲೆ ಪೂರ್ತಿ ಮಳೆಯಿಂದಾಗಿ ಜಲಾವೃತವಾಗಿದೆ. ದಿನನಿತ್ಯ ಜೀವನ ಕಷ್ಟಕರವಾಗಿದೆ. ಹೀಗಾಗಿ, ಅವರಿಗೆ ನೆರವಾಗಿ, ಸಹಾಯ ಮಾಡಿ ಎಂದು ತಮ್ಮ ಅಭಿಮಾನಿಗಳನ್ನ ಮನವಿ ಮಾಡಿಕೊಂಡಿದ್ದಾರೆ ಕನ್ನಡ ಸ್ಟಾರ್ ನಟರು. ದರ್ಶನ್ ಮತ್ತು ಸುದೀಪ್ ಇಬ್ಬರು ಕೊಡಗಿನ ಜನತೆಗೆ ನೆರವು ನೀಡಿ ಎಂದು ಟ್ವಿಟ್ಟರ್ ನಲ್ಲಿ ಕೇಳಿಕೊಂಡಿದ್ದಾರೆ. ''ಕೊಡಗಿನ ಎಲ್ಲ ಜನರಿಗೆ ನಮ್ಮ ಸಹಾಯ ಮತ್ತು ಬೆಂಬಲ ಅಗತ್ಯವಿದೆ. ನಮ್ಮಿಂದ ಸಾಧ್ಯವಾದಷ್ಟು ಅವರಿಗೆ ನೆರವಾಗೋಣ. ನನ್ನ ಸಂಪೂರ್ಣ ಬೆಂಬಲ ಕೊಡಗಿನ ಜನರಿಗೆ ಇದೆ'' ಎಂದು ಟ್ವೀಟ್ ಮಾಡಿರುವ ದರ್ಶನ್ ಬೆಂಗಳೂರು ಮತ್ತು ಗೋಣಿಕೊಪ್ಪಲ್ ಪ್ರದೇಶದಲ್ಲಿರುವ ಸಹಾಯ ಕೇಂದ್ರಗಳ ವಿಳಾಸ ಹಂಚಿಕೊಂಡಿದ್ದಾರೆ. ಸಹಾಯ ಮಾಡಲು ಬಯಸುವವರು ದಯವಿಟ್ಟು ನೆರವು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ''ನನ್ನ ಎಲ್ಲ ಅಭಿಮಾನಿ ಸಂಘಟನೆಗಳಿಗೂ ನನ್ನದೊಂದು ಕೋರಿಕೆ. ಮಳೆಯಲ್ಲಿ ಸಿಲುಕಿರುವ ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿ. ಇದು ನೀವು ನನಗೆ ನೀಡುವ ಬಹುದೊಡ್ಡ ಉಡುಗೊರೆ ಎಂದುಕೊಳ್ಳುತ್ತೇನೆ. ಅವರೆಲ್ಲರೂ ನಮ್ಮ ಜನ. ದಯವಿಟ್ಟು ನಿಮ್ಮಿಂದ ಆದಷ್ಟು ಸಹಾಯ ಮಾಡಿ. ಸರ್ಕಾರ ಕೂಡ ಈ ಬಗ್ಗೆ ಗಮನಿಸಿ ನೆರವು ನೀಡಿ'' ಎಂದು ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.    

short by Pawan / more at Filmibeat

Comments