Skip to main content


ಅಂಬಿ ನಿಂಗ್ ವಯಸ್ಸಾಯ್ತೋ ಆಡಿಯೋ ರಿಲೀಸ್ ಮತ್ತೆ ಮುಂದಕ್ಕೆ

ಅಂಬರೀಶ್ ಮತ್ತು ಸುದೀಪ್ ನಟಿಸಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಹಾಡುಗಳ ಬಿಡುಗಡೆ ಇಂದು ಆಗಬೇಕಿತ್ತು. ಕಳೆದ ವಾರ ನಡೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಆಗಸ್ಟ್ 10ಕ್ಕೆ ಹಾಡುಗಳು ಬಿಡುಗಡೆಯಾಗಲಿವೆ ಎಂದು ಚಿತ್ರತಂಡ ಹೇಳಿತ್ತು. ಸಮಾರಂಭಕ್ಕೆ ಕನ್ನಡದ ಎಲ್ಲಾ ದೊಡ್ಡ ಸ್ಟಾರ್​​ಗಳೊಂದಿಗೆ ಇತರ ಭಾಷೆಗಳ ಸ್ಟಾರ್​​​​ಗಳು ಕೂಡಾ ಬರಲಿದ್ದಾರೆ ಎಂದು ಕೂಡಾ ಹೇಳಲಾಗಿತ್ತು. ಇದೀಗ ಈ ಸಮಾರಂಭ ಮುಂದಕ್ಕೆ ಹೋಗಿದೆ. ಆದರೆ ಹಾಡುಗಳು ಯಾವತ್ತು ಬಿಡುಗಡೆಯಾಗುತ್ತಿದೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ. ಎಲ್ಲರ ಡೇಟ್ಸ್ ಹೊಂದಿಸಿಕೊಂಡು, ಆ ನಂತರ ಹಾಡುಗಳ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ. ಸದ್ಯದಲ್ಲೇ ಆ ದಿನಾಂಕ ಬಹಿರಂಗವಾಗಲಿದೆ.     

short by Pawan / more at Eenadu India

Comments