Skip to main content


ಯಶ್ ಜೊತೆಗೆ ನಟಿಸಿದ್ದು ಸಖತ್ ಖುಷಿ ಕೊಟ್ಟಿದೆ ಎಂದ ಶ್ರೀನಿಧಿ ಶೆಟ್ಟಿ

ಸದ್ಯ 'ಕೆಜಿಎಫ್' ಚಿತ್ರ ತಂಡ ತಮ್ಮ ಚಿತ್ರೀಕರಣವನ್ನು ಮುಗಿಸಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದೆ ಚಿತ್ರತಂಡ.  ಈಗಾಗಲೇ ಸಾಕಷ್ಟು ವಿಚಾರಗಳಿಂದ ಗಮನ ಸೆಳೆದಿರುವ ಚಿತ್ರವು ಈ ಯಾವಾಗ ಬಿಡುಗಡೆಯಾಗುತ್ತದೆ ಅಂತಾ ಕಾತುರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು. ಸದ್ಯ ಈ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಕೂಡಾ ಈ ಚಿತ್ರ ಮುಗಿದಿರುವ ಖುಷಿಯಲ್ಲಿದ್ದಾರೆ.  ಸದ್ಯ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ನಾಯಕಿ ಶ್ರೀನಿಧಿ ಸಿನಿಮಾ ಬಗೆಗೆ ತಮ್ಮದೇ ಆದ ಮಾತುಗಳನ್ನಾಡಿದ್ದಾರೆ. 'ಈ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿದ್ದು ನನ್ನ ಜೀವನದ ಅತ್ಯುತ್ತಮ ತೀರ್ಮಾನ. ಎರಡು ವರ್ಷದ ಹಿಂದೆ ಈ ಸಿನಿಮಾ ತಂಡಕ್ಕೆ ಸೇರಿಕೊಂಡೆ. ಈ ಸಿನಿಮಾ ತುಂಬಾನೇ ವಿಶೇಷ. ಇದರಲ್ಲಿ ನಾನೂ ಒಂದು ಭಾಗವಾಗಿರುವುದು ಹೆಮ್ಮೆಯ ವಿಚಾರ. ಇಂತಹ ಅದ್ಭುತ ಸಿನಿಮಾದಿಂದ ಸಿನಿರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಇನ್ನಷ್ಟು ಖುಷಿ ತಂದಿದೆ' ಅಂತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

short by Nithin

Comments