Skip to main content


ಮೈ ನೇಮ್ ಈಸ್ ಕಿರಾತಕ ಅಂದ್ರು ಯಶ್

ವರಮಹಾಲಕ್ಷ್ಮೀ ಹಬ್ಬ ಅಂದರೆ ಆಗಸ್ಟ್ 24ಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಚಿತ್ರ ಕಿರಾತಕ 2 ಸೆಟ್ಟೇರುತ್ತೆ ಅನ್ನೋದು ಸುದ್ದಿಯಾಗಿತ್ತು. ಆದರೆ ಇದಕ್ಕಿಂತ ಮೊದಲು “ಮೈ ನೇಮ್ ಈಸ್ ಕಿರಾತಕ” ಸಿನಿಮಾ ಸೆಟ್ಟೇರಲಿದೆ. ಸ್ಯಾಂಡಲ್‍ವುಡ್‍ ನಲ್ಲಿ ಯಶ್ ಅಭಿನಯಿಸುತ್ತಿರುವ ಮುಂದಿನ ಚಿತ್ರ `ಕಿರಾತಕ 2′ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಹಿಂದೆ ಯಶ್ ಅಭಿನಯದ `ಕಿರಾತಕ’ ಚಿತ್ರವನ್ನು ನಿರ್ದೇಶಿಸಿದ್ದ ಪ್ರದೀಪ್ ರಾಜ್ ಈ ಬಗ್ಗೆ `ಕಿರಾತಕ 2′ ನಮ್ಮ ಬ್ಯಾನರ್  ನಲ್ಲಿ ರಿಜಿಸ್ಟರ್ ಆಗಿ ಎಂಬುದಾಗಿ ದೂರಿದ್ದರು. ಈಗ ಈ ವಿವಾದಕ್ಕೆ ಯಶ್ ನ ಮುಂದಿನ ಚಿತ್ರತಂಡ ಫುಲ್‍ಸ್ಟಾಪ್ ಇಟ್ಟಿದೆ. ಇದೇ ತಿಂಗಳ ಆಗಸ್ಟ್ 27 ಕ್ಕೆ ಯಶ್ ಮುಂದಿನ ಚಿತ್ರ ಸೆಟ್ಟೇರೋಕೆ ವೇಳೆ ನಿಗದಿಯಾಗಿದ್ದು, ಚಿತ್ರದ ಶೀರ್ಷಿಕೆ “ಮೈ ನೇಮ್ ಈಸ್ ಕಿರಾತಕ” ಎಂಬುದಾಗಿದೆ. ಆಗಸ್ಟ್ 27 ಕ್ಕೆ ಮೈಸೂರಿನಲ್ಲಿ ಶೂಟಿಂಗ್ ನಡೆಯುವ ಜಾಗದಿಂದಲೇ ಸರಳವಾಗಿ ಮುಹೂರ್ತ ನೆರವೇರಿಸಿ ಚಿತ್ರೀಕರಣಕ್ಕೆ ಚಿತ್ರತಂಡ ಚಾಲನೆ ಕೊಡಲಿದೆ.  

short by Pawan / more at Public Tv

Comments