Skip to main content


ಸ್ಯಾಂಡಲ್‍ವುಡ್ ನಟ ಕರೆದರೆ ಈಗಲೇ ಕನ್ನಡ ಸಿನಿಮಾ ಮಾಡ್ತೀನಿ ಅಂದ್ರು ನಾಗಾರ್ಜುನ್

ಗುರುವಾರ ಮಾರತಹಳ್ಳಿಯಲ್ಲಿ ಆರಂಭವಾದ ಮಳಿಗೆಯೊಂದರ ಉದ್ಘಾಟನೆ ಸಮಾರಂಭಕ್ಕೆ ನಾಗಾರ್ಜುನ್ ಹಾಗೂ ಶಿವರಾಜ್‍ಕುಮಾರ್ ಆಗಮಿಸಿದ್ದರು. ಇಬ್ಬರು ಒಟ್ಟಿಗೆ ಸಿನಿಮಾ ಮಾಡೋ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂಬುವುದು ಕಾರ್ಯಕ್ರಮದಲ್ಲಿ ಗೊತ್ತಾಗಿದೆ. ಶಿವಣ್ಣ ಕರೆದರೆ ತಕ್ಷಣ ಬಂದು ಬಿಡ್ತೀನಿ. ಒಂದು ಅದ್ಭುತವಾದ ಕಥೆ ಸಿಕ್ಕರೆ ಖಂಡಿತಾ ಅವರ ಜೊತೆ ಸಿನಿಮಾ ಮಾಡುತ್ತೇನೆ. ಅದರಲ್ಲೂ ಶಿವಣ್ಣ ಅವರ ಜೊತೆಯಲ್ಲಿ ಅಂದರೆ ಈಗ ಕರೆದರೂ ನಾನು ನಟಿಸುತ್ತೇನೆ. ಡಾ. ರಾಜ್‍ಕುಮಾರ್ ಅವರ ಆ್ಯಕ್ಟಿಂಗ್ ನೋಡಿದ್ದೇನೆ. ಅಲ್ಲದೇ ನನ್ನ ಅಭಿನಯ ನೋಡಿ ಮೆಚ್ಚಿಕೊಂಡು ಫೋನ್ ಕೂಡ ಮಾಡಿದ್ದರು. ಎಂದು ನಾಗಾರ್ಜುನ್ ತಿಳಿಸಿದ್ದಾರೆ.   

short by Pawan / more at Public Tv


Comments