Skip to main content


ಕನ್ನಡದ ಹುಡುಗಿಯರಿಗೆ ಒಡೆಯನಿಂದ ಸ್ಪೆಷಲ್ ಆಫರ್

ದರ್ಶನ್ ಅವರ ನಟನೆಯ 52ನೇ ಚಿತ್ರ `ಒಡೆಯ’. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಈ ಚಿತ್ರಕ್ಕಾಗಿ ನಟಿಯ ಆಯ್ಕೆ ನಡೆಯುತ್ತಿದೆ. ಕಳೆದ ಒಂದು ವಾರದಿಂದ ನಟಿ ಆಯ್ಕೆ ಪ್ರಕ್ರಿಯೆಯಲ್ಲಿ ಚಿತ್ರತಂಡ ತೊಡಗಿದೆ. ಆದರೆ ಇನ್ನು ದರ್ಶನ್ ಜೊತೆ ಅಭಿನಯಿಸುವ ನಾಯಕಿ ಅಂತಿಮವಾಗಿಲ್ಲ. ಈ ಸಿನಿಮಾ ಬಣ್ಣದ ಲೋಕದ ಕನಸು ಹೊತ್ತು ಚಿಕ್ಕದೊಂದು ಅವಕಾಶಕ್ಕಾಗಿ ಕಾಯುತ್ತಿರುವ ಹುಡುಗಿಯರಿಗಾಗಿ ಒಂದು ಅವಕಾಶ ನೀಡಿದೆ. ಅಂದರೆ ಈ ಸಿನಿಮಾದಲ್ಲಿ ಅಭಿನಯಿಸಲು ನಮ್ಮ ಕನ್ನಡ ಮಣ್ಣಿನ ಹುಡುಗಿಯೇ ಆಗಿರಬೇಕು. ಅಷ್ಟೇ ಅಲ್ಲದೇ ಈ ಸಿನಿಮಾಗೆ ವರ್ಕ್ ಮಾಡುವ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಕನ್ನಡದವರೇ ಆಗಿರಬೇಕು ಅಂತ ದರ್ಶನ್ ಅವರು ಹೇಳಿದ್ದಾರಂತೆ. ಹೌದು, ದುಡ್ಡು ಹಾಕೋರು ಕನ್ನಡದವರು, ಸಿನಿಮಾನ ನಿರ್ಮಾಣ ಮಾಡುವವರು ಕನ್ನಡದವರು. ಆದ್ದರಿಂದ ನಾವ್ಯಾಕೆ ಪರಭಾಷಾ ನಟಿಯರಿಗೆ ಮಣೆ ಹಾಕಬೇಕು ಅನ್ನೋದು ದರ್ಶನ್ ಮೊದಲ ಪ್ರಶ್ನೆಯಾಗಿದ್ದು, ತಮ್ಮ ಜೊತೆ ತೆರೆ ಹಂಚಿಕೊಳ್ಳುವರು ಕನ್ನಡದ ಹುಡುಗಿ ಆಗಿರಬೇಕು ಅಂತ ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ.   

short by Pawan / more at Public Tv

Comments