Skip to main content


ಕಾಲೆಳೆಯುವವರು ಇದ್ರೆನೇ ಬೆಳೆಯಲು ಸಾಧ್ಯ- ದಿ ವಿಲನ್ ಬಗ್ಗೆ ಪ್ರೇಮ್ ಮಾತು

ಸ್ಯಾಂಡಲ್ ವುಡ್ ನ ದಿಗ್ಗಜರುಗಳಾದ ಶಿವಣ್ಣ ಹಾಗೂ ಸುದೀಪ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಅನೇಕ ಮಂದಿ ನನ್ನ ವಿರುದ್ಧ ಮಾತನಾಡಿದ್ರು. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಇಂದು ನಾನು ದಿ ವಿಲನ್ ಸಿನಿಮಾ ಮಾಡಿದ್ದೇನೆ. ಒಟ್ಟಿನಲ್ಲಿ ಕಾಲೆಳೆಯುವವರು ಇದ್ರೇನೆ ನಾವು ಬೆಳೆಸಲು ಸಾಧ್ಯ ಅಂತ ನಿರ್ದೇಶಕ ಪ್ರೇಮ್ ಹೇಳಿದ್ರು. ತನ್ನ ಸಿನಿಮಾ ಪ್ರಚಾರದ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ಬರೀ ಪ್ರಚಾರ ಅಲ್ಲ. ಅದರಿಂದ ಸಮಾಜಕ್ಕೆ ಉಪಯೋಗವಾಗಲಿ ಎಂಬುದೇ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ದಿ ವಿಲನ್ ತಂಡಕ್ಕೆ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ಪ್ರಚಾರದಿಂದ ಬಂದದ್ರಲ್ಲಿ ಒಂದು ಪರ್ಸೆಂಟ್ ಹಣವನ್ನು ನಾವು ನಿರ್ದೇಶಕರ ಸಂಘಕ್ಕೆ ಕೊಡುತ್ತಿದ್ದೇವೆ ಅಂತ ಅವರು ಹೇಳಿದ್ರು.    

short by Pawan / more at Public Tv

Comments