Skip to main content


ಕೊಡಗಿನ ಸ್ಥಿತಿಗೆ ಉಪೇಂದ್ರ, ರವಿಚಂದ್ರನ್ ನೀಡಿದ ಸಲಹೆ

ಅಂದಹಾಗೆ, ಇದೀಗ ನಟ ಉಪೇಂದ್ರ ಹಾಗೂ ರವಿಚಂದ್ರನ್ ಕೊಡಗಿನ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ''ಈ ರೀತಿಯ ಪರಿಸ್ಥಿತಿ ಬಂದಾಗ ಸರ್ಕಾರ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಅವರಿಗೆ ಮನೆ ಮಾಡಿ ಅವರ ಜೀವನ ಮತ್ತೆ ಸರಿಯಾಗುವ ತನಕ ಸರ್ಕಾರ ಅವರ ಜೊತೆಗೆ ಇರಬೇಕು. ನನ್ನ ಪ್ರಕಾರ ಪ್ರಕೃತಿ ವಿಕೋಪದ ಬಗ್ಗೆಯೇ ಒಬ್ಬ ಸಚಿವ ಇರಬೇಕು. ಅವರು ಯಾವಾಗಲೂ ಸರ್ವ ಸಿದ್ಧರಾಗಿರಬೇಕು. ಅವರು ಇದ್ದಾರೆ ಎನ್ನುವ ನಂಬಿಕೆ ಜನರಲ್ಲಿ ಇರಬೇಕು. ನಾಳೆ ಏನಾದರೂ ಆದರೂ ಅದನ್ನು ನಿಭಾಹಿಸುವ ಶಕ್ತಿ ಅವರಲ್ಲಿ ಇರಬೇಕು'' - ಉಪೇಂದ್ರ. ನಟ, ನಿರ್ದೇಶಕ, ಯು ಪಿ ಪಿ ಪಕ್ಷದ ಅಧ್ಯಕ್ಷ. ''ಈ ವಿಷಯ ಎಲ್ಲರಲ್ಲಿಯೂ ನೋವು, ದುಖಃ ತಂದಿದೆ. ಅದಕ್ಕೆ ಎಲ್ಲರೂ ವೇಗವಾಗಿ ಸ್ಪಂದಿಸುತ್ತಿದ್ದಾರೆ. ಎಲ್ಲರೂ ಆಹಾರ ಕಳುಹಿಸುತ್ತಿದ್ದಾರೆ. ಆದರೆ, ಪೂರ್ಣ ಪರಿಹಾರಕ್ಕೆ ಆಹಾರ ಕಳಿಸುವುದು ಅಷ್ಟೇ ಮುಖ್ಯವಲ್ಲ. ಹೇಗೆ ಅವರಿಗೆ ಹೊಸ ಜೀವನ ಕೊಡುವುದು ಎಂಬುದನ್ನು ಯೋಚನೆ ಮಾಡಬೇಕು. ಮತ್ತೆ ಕೊಡಗನ್ನು ಕಟ್ಟಬೇಕು.'' - ರವಿಚಂದ್ರನ್, ನಟ, ನಿರ್ದೇಶಕ.  

short by Pawan / more at Filmibeat

Comments