Skip to main content


ಉಪೇಂದ್ರ-ರವಿಚಂದ್ರನ್ ಹೊಸ ಚಿತ್ರಕ್ಕೆ ಟೈಟಲ್​ ಫಿಕ್ಸ್​​ !

ಇದಕ್ಕೂ ಮುನ್ನ ಚಿತ್ರದ ಟೈಟಲ್ ಬಗ್ಗೆ ಒಂದಿಷ್ಟು ಗೊಂದಲಗಳಿದ್ದವು. ಚಿತ್ರಕ್ಕೆ 'ರವಿ-ಚಂದ್ರ' ಅಥವಾ 'ದಿಲ್ ಉಪೇಂದ್ರ' ಎನ್ನುವ ಹೆಸರುಗಳನ್ನಿಡಬೇಕು ಎಂಬ ಯೋಚನೆ ಚಿತ್ರತಂಡದವರಿಗಿತ್ತು. ಕೊನೆಗೆ 'ರವಿ-ಚಂದ್ರ' ಎಂಬ ಟೈಟಲ್ ಅಂತಿಮಗೊಳಿಸಲಾಗಿದೆ. ಇನ್ನು ಚಿತ್ರಕ್ಕೆ ಆಗಸ್ಟ್ 11ರಂದು ಫೋಟೋಶೂಟ್ ನಡೆಯಲಿದ್ದು, ಅಂದು ರವಿ ಮತ್ತು ಉಪ್ಪಿ ಇಬ್ಬರೂ ಭಾಗವಹಿಸುವ ಸಾಧ್ಯತೆ ಇದೆ. ಇನ್ನು ಓಂಪ್ರಕಾಶ್ ರಾವ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಇದೇ ತಿಂಗಳ 20ರಂದು ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರವನ್ನು ಆರ್.ಎಸ್. ಪ್ರೊಡಕ್ಷನ್​​ನಡಿ ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಶಾನ್ವಿ ಶ್ರೀವಾತ್ಸವ್ ಮತ್ತು ನಿಮಿಕಾ ರತ್ನಾಕರ್ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ರವಿಕುಮಾರ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಅವರ ಸಂಕಲನವಿದೆ.   

short by Pawan!

Comments