Skip to main content


ಯಶ್​ ಜತೆ ಹೆಜ್ಜೆ ಹಾಕಲು ತಮನ್ನಾ ಪಡೆದ ಸಂಭಾವನೆ ಎಷ್ಟು ?

ಬಾಲಿವುಡ್​ನ 'ಕ್ವೀನ್' ಚಿತ್ರದ ತೆಲುಗು ರಿಮೇಕ್ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಅವರ ಕೆಜೆಎಫ್​ ಚಿತ್ರದಿಂದ ಬಂದಿದ್ದ ಆಫರ್​ ಅಪ್ಪಿಕೊಂಡ ತಮನ್ನಾ, ಯಶ್​ ಜತೆ ಸೊಂಟ ಬಳುಕಿಸಿದ್ದಾರೆ. ನಿನ್ನೆ ಈ ಸಾಂಗ್ ಶೂಟ್​ ಕಂಪ್ಲೀಟ್​ ಆಗಿದ್ದು, ತೆರೆಯ ಮೇಲೆ ಈ ಜೋಡಿಯನ್ನು ಕಣ್ತುಂಬಿಕೊಳ್ಳಲು ಯಶ್ ಫ್ಯಾನ್ಸ್​ ಕಾತುರರಾಗಿದ್ದಾರೆ. ಈ ನಡುವೆಯೇ ಈ ಸಾಂಗ್​ನಲ್ಲಿ ನಟಿಸಲು ತಮನ್ನಾ ಪಡೆದಿರುವ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆಯೊಂದು ಗಾಂಧಿ ನಗರ ಜನತೆಯನ್ನು ಕಾಡುತ್ತಿದೆ. ಮೂಲಗಳ ಪ್ರಕಾರ ಈ ಐಟಂ ಸಾಂಗ್​ಗೆ ತಮನ್ನಾಗೆ ಸುಮಾರು 40 ಲಕ್ಷ ರೂಪಾಯಿ ನೀಡಲಾಗಿದೆಯಂತೆ. ಕೇವಲ ನಾಲ್ಕೈದು ನಿಮಿಷದ ಸಾಂಗ್​ಗೆ ಬಾಹುಬಲಿ ಬೆಡಗಿ ಪಡೆದಿರುವ ಸಂಭಾವನೆ ಎಲ್ಲರ ಗಮನ ಸೆಳೆದಿದೆ.     

short by Pawan!

Comments