Skip to main content


ದರ್ಶನ್ ನನ್ನ ನಡುವೆ ಮುನಿಸಿಲ್ಲ, ಕುರುಕ್ಷೇತ್ರ ನನ್ನಿಂದಾಗಿ ನಿಂತಿಲ್ಲ: ನಿಖಿಲ್ ಕುಮಾರಸ್ವಾಮಿ

ಸೀತಾರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರ್, ಸೀತಾರಾಮ ಕಲ್ಯಾಣ ನನ್ನ ಎರಡನೇ ಸಿನಿಮಾ. ಕುರಕ್ಷೇತ್ರ ಸೇರಿದರೆ ಇದು ಮೂರನೇ ಸಿನಿಮಾ. ದರ್ಶನ್ ಇಂದು 52 ಅಥವಾ 53ನೇ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ. ನಾನು ಎಷ್ಟೇ ಸಿನಿಮಾಗಳನ್ನು ಮಾಡಿದ್ರೂ, ನಾನು ಏನು ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ಗಾಂಧಿನಗರದಲ್ಲಿ ಹಲವು ವಿಚಾರಗಳು, ಊಹಾಪೋಹಗಳು ಹರಿದಾಡುತ್ತಿರುತ್ತವೆ. ಅಂತಹ ವಿಚಾರಗಳ ಬಗ್ಗೆ ಚರ್ಚೆ ನಡೆಸೋದು ಸೂಕ್ತವಲ್ಲ. ನಾವೆಲ್ಲರೂ ಕನ್ನಡ ಚಿತ್ರರಂಗದ ಅಭಿಮಾನಿಗಳು. ಕನ್ನಡ ಸಿನಿಮಾ ಉಳಿಬೇಕು ಎಂಬ ಉದ್ದೇಶದಿಂದ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ರು. ಮುನಿರತ್ನ ಕುರುಕ್ಷೇತ್ರ ಚಿತ್ರದಲ್ಲಿ ನನ್ನ ಅಭಿಮನ್ಯು ಪಾತ್ರದ ಡಬ್ಬಿಂಗ್ ಬಾಕಿ ಉಳಿದುಕೊಂಡಿದೆ. ಇತ್ತೀಚೆಗೆ ಮುನಿರತ್ನ ಸರ್ ಜೊತೆ ಡಬ್ಬಿಂಗ್ ಬಗ್ಗೆ ಮಾತನಾಡಿದ್ದೇನೆ. ಅಭಿಮನ್ಯು ಪಾತ್ರದ ಸಿಜೆ (ಗ್ರಾಫಿಕ್ಸ್) ನಡೆಯುತ್ತಿದ್ದು, ಅರ್ಧ ಮಾತ್ರ ಬಾಕಿ ಉಳಿದುಕೊಂಡಿದೆ. ಸಿಜೆ ಮುಗಿದ ಬಳಿಕ ಮುನಿ ಸರ್ ಯಾವಾಗ ಕರೆದರೂ ನಾನು ಹೋಗಿ ಡಬ್ಬಿಂಗ್ ಮಾಡಿಕೊಟ್ಟು ಬರ್ತೀನಿ. ಸೀತಾರಾಮ ಕಲ್ಯಾಣ ನಮ್ಮ ಹೋಮ್ ಬ್ಯಾನರ್‍ನಲ್ಲಿ ನಡೆಯುತ್ತಿದ್ದು, ಒಂದೆರೆಡು ದಿನ ಹೊಂದಾಣಿಕೆ ಮಾಡಿಕೊಳ್ಳತ್ತೇನೆ ಎಂದು ತಿಳಿಸಿದರು.   

short by Pawan / more at Public Tv

Comments