Skip to main content


ನಟ ಸುದೀಪ್ ವಿರುದ್ಧದ ವಂಚನೆ ಆರೋಪಕ್ಕೆ ಟ್ವಿಸ್ಟ್

ನಟ ಸುದೀಪ್ ವಿರುದ್ಧದ ವಂಚನೆ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಫಿ ತೋಟದ ಮಾಲೀಕ ದೀಪಕ್ ಮಯೂರ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾರಸ್ದಾರ ಧಾರಾವಾಹಿ ಕಾರ್ಯಕಾರಿ ನಿರ್ಮಾಪಕ ಮಹೇಶ್ ಪ್ರತ್ಯಾರೋಪ ಮಾಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹೇಶ್, ಈ ಮೊದಲು ನನಗೆ ಅನ್ಯಾಯವಾಗಿದೆ ಎಂದು ದೀಪಕ್ ಚಿಕ್ಕಮಗಳೂರು ಎಸ್‍ಪಿ ಬಳಿ ಹೋಗಿದ್ದರು. ಅಲ್ಲಿ ನನಗೆ 88 ರಿಂದ 90 ಲಕ್ಷ ರೂ. ಆಗಿದೆ ಅಂತಾ ಆರೋಪಿಸಿದರು. ಆದರೆ ಎಸ್‍ಪಿ ತೋಟದ ಬೆಲೆಯೇ ಅಷ್ಟಿಲ್ಲ. ಹಾಗಾಗಿ ನೀವು ನ್ಯಾಯಾಲಯದ ಮೊರೆ ಹೋದರೆ ಒಳ್ಳೆಯದು ಎಂದು ಸಲಹೆ ನೀಡಿ ಕಳುಹಿಸಿದರು. ಎಸ್‍ಪಿ ಸಲಹೆಯಂತೆ ದೀಪಕ್ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಿತ್ತು. ನಾವು ಅಲ್ಲಿಯೂ ನ್ಯಾಯಾಲಯಕ್ಕೆ ನಮ್ಮ ಬಳಿಯ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.   

short by Pawan / more at Public Tv

Comments