Skip to main content


ಹೊಸ ಜೀವನಕ್ಕೆ ಅಡಿಯಿಟ್ಟ ಪವನ್ ಒಡೆಯರ್ ದಂಪತಿಗೆ ಶುಭ ಕೋರಿದ ಪುನೀತ್

ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ... ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶರಣ್, ಯಶ್ ಹಾಗೂ ಧನಂಜಯ್ ಅಂತಹ ತಾರೆಯರಿಗೆ ಆಕ್ಷನ್ ಕಟ್ ಹೇಳಿದ ಪವನ್ ಒಡೆಯರ್ ಇದೀಗ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ನಟಿ ಅಪೇಕ್ಷಾ ಪುರೋಹಿತ್ ಜೊತೆಗೆ ಇಂದು ನಿರ್ದೇಶಕ ಪವನ್ ಒಡೆಯರ್ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಅಪೇಕ್ಷಾ ಪುರೋಹಿತ್-ಪವನ್ ಒಡೆಯರ್ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಈ ಜೋಡಿ ಇದೀಗ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಇವರಿಬ್ಬರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು, ನವ ದಂಪತಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ್ದಾರೆ.  

short by Pawan!

Comments