Skip to main content


ಜೋಗಿ ಚಿತ್ರಕ್ಕೆ ತುಂಬಿತು ಹದಿಮೂರು ವರ್ಷ!!

ಅರೇ 'ಜೋಗಿ' ಎಂಬ ಮಾತು ಇಡೀ ಕರುನಾಡ ಸಿನಿಮಾ ರಸಿಕರ ಬಾಯಲ್ಲಿ ಗುಣು ಗುಣುಸಿತ್ತಿದ್ದ ಕಾಲವದು. ಯಾವ ಸಿನಿಮಾ ಮಂದಿರದಲ್ಲಿ ನೋಡಿದರು ಜೋಗಿಯ ಬ್ಯಾನರ್ಗಳು. ಶಿವರಾಜ್‍ಕುಮಾರ್ ನಟನೆಯಲ್ಲಿ ಮೂಡಿ ಬಂದ ಸಿನಿಮಾಕ್ಕೆ ಇಂದು 13 ವರ್ಷಗಳು ತುಂಬಿದೆ. ಪ್ರೇಮ್ ಅವರ ಸಾರಥ್ಯದಲ್ಲಿ ತೆರೆ ಕಂಡ ಜೋಗಿ ಸಿನಿಮಾವು ಸುಮಾರು 61 ಸಿನಿ ಮಂದಿರಗಳಲ್ಲಿ 100 ದಿನವನ್ನು ಪೂರೈಸಿ ಹೊಸ ದಾಖಲೆಯನ್ನು ಮಾಡಿತು. ಇದರ ಮೂಲಕ ಶಿವಣ್ಣ ಮತ್ತು ಪ್ರೇಮ್ ಜೋಡಿ ಚಂದನವನದನಲ್ಲಿ ಹೊಸ ಅಲೆಯೊಂದನ್ನೇ ಸೃಷ್ಟಿಸಿ ಬಿಟ್ಟಿತ್ತು. ಅಶ್ವಿನಿ ನಿರ್ಮಾಣದಡಿಯಲ್ಲಿ ಮೂಡಿ ಬಂದ ಸಿನಿಮಾಕ್ಕೆ ನಾಯಕಿಯಾಗಿ ಜೆನಿಫರ್ ಕೊತ್ವಾಲ್ ನಟಿಸಿದ್ದಾರೆ. ಎಮ್ ಆರ್ ಸೀನ್ ಛಾಯಗ್ರಹಣ ಈ ಸಿನಿಮಾಕ್ಕಿದ್ದು, ಗುರು ಕಿರಣರ ಸಂಗೀತದ ಸಿನಿಮಾಕ್ಕೆ ಹೊಸ ರಂಗನ್ನು ತಂದು ಕೊಡುವುದರೊಂದಿಗೆ ಸ್ಯಾಂಡಲ್‍ವುಡಿನಲ್ಲಿ ಹೊಸ ಅಲೆಯನ್ನು ಸೃಷ್ಠಿಸಿತು.   

short by Pawan / more at Balkani News

Comments