Skip to main content


ಕೊಡಗಿನ ಕಣ್ಣೀರಿಗೆ ಸ್ಪಂದಿಸಿದವರಿಗೆ ಭಾವುಕರಾಗಿ ವಂದಿಸಿದ ಕೊಡವತಿ ರಶ್ಮಿಕಾ!

ಈಗ ಕೊಡಗಿನವರ ನೋವಿಗೆ ಸ್ಪಂದಿಸಿದ ಎಲ್ಲರಿಗೂ ನಟಿ ರಶ್ಮಿಕಾ ಮಂದಣ್ಣ ಟ್ವಿಟರ್ ಮುಖಾಂತರ ವಂದನೆ ಸಲ್ಲಿಸಿದ್ದಾರೆ. 'ನಾನು ಹುಟ್ಟಿ ಬೆಳೆದ , ಓದಿದ್ದ, ಆಡಿದ್ದ ಕೊಡಗು ಇಂದು ಮುಳುಗಿ ಹಡಗಾಗಿದೆ. ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ನೀರು ಪಾಲಾಗಿದ್ದಾರೆ ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ಕೊಡಗಿನವರ ನೋವಿಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು. ಕೊಡಗಿನವರ ನೊಂದ ಬದುಕನ್ನು ಪುನನಿರ್ಮಿಸಬೇಕಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿ' ಎಂದು ನಟಿ ರಶ್ಮಿಕಾ ಮಂದಣ್ಣ ಮನವಿ ಮಾಡಿದ್ದಾರೆ.  

short by Pawan!