Skip to main content


ಬೆಂಗಳೂರಿನಲ್ಲಿ ಮುಂದಿನ ತಿಂಗಳು ಭಾರೀ ಮಳೆಯ ಮುನ್ಸೂಚನೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ನಗರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. ಮಹಾಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿದ್ಧತೆ ಆರಂಭಿಸಿದ್ದು, ಇದಿನಿಂದಲೇ ನಗರದ ಪ್ರಮುಖ ಸ್ಥಳ ಪರಿಶೀಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳಿಗೆ ಚಾಲನೆ ಕೊಡಲು ತೀರ್ಮಾನ ಮಾಡಿದೆ. ಕಳೆದ ವರ್ಷ ಮಳೆಗೆ ಹಾನಿಗೀಡಾಗಿದ್ದ 356 ಪ್ರದೇಶಗಳಲ್ಲಿ ಸದ್ಯ ಬಿಬಿಎಂಪಿ ಮುಂಜಾಗ್ರತೆ ವಹಿಸಲು ಸಿದ್ಧತೆ ನಡೆಸಿದೆ. 

short by Pawan / more at Kannada News Now

Comments