Skip to main content


ವೆಬ್ ಸೀರಿಸ್ ಪ್ರಪಂಚಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ಉಪೇಂದ್ರ

ವೆಬ್ ಸೀರಿಸ್ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಎಲ್ಲ ಭಾಷೆಗಳಲ್ಲೂ ವೆಬ್ ಸೀರಿಸ್ ಆರಂಭವಾಗುತ್ತಿದೆ. ಕನ್ನಡದಲ್ಲೂ ಇಂತಹ ಪ್ರಯತ್ನಗಳು ಜಾಸ್ತಿಯಾಗುತ್ತಿದೆ. ಬಿಗ್ ಸ್ಕ್ರೀನ್ ನಲ್ಲಿ ಸೂಪರ್ ಆಗಿರುವ ಉಪ್ಪಿ ಈಗ ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ವೆಬ್ ಸೀರಿಸ್ ತಂಡಕ್ಕೆ ಜೊತೆಯಾಗುತ್ತಿದ್ದಾರೆ. ವಿನಾಯಕ್ ಜೋಶಿ 'ಜೋಶಿಲೆ' ಎಂಬ ವೆಬ್ ಸೀರಿಸ್ ಮಾಡ್ತಿರುವುದು ಹಲವು ದಿನಗಳ ಹಿಂದೆಯೇ ಸುದ್ದಿಯಾಗಿತ್ತು. ಈ ತಂಡಕ್ಕೀಗ ಸ್ಟಾರ್ ನಟ ಉಪ್ಪಿ ಸಾಥ್ ಕೊಡ್ತಿದ್ದಾರೆ. ಆದ್ರೆ, ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.  

short by Pawan / more at Filmibeat

Comments