Skip to main content


ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡದ ಈ ಚಿತ್ರ ಮಾಡಿರುವ ರೆಕಾರ್ಡ್ ನ ಮುರಿಯೋದು ಸುಲಭದ ಮಾತಲ್ಲ..! ಯಾರು ಗೊತ್ತಾ ಹೀರೋ? ಯಾವುದು ಗೊತ್ತಾ ಚಿತ್ರ?

ಕಳೆದ ವರ್ಷ ತೆರೆಕಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರ ಮೈಸೂರಿನ ಡಿಆರ್ಸಿ ಸಿನಿಮಾಸ್ ಮಲ್ಟಿಪ್ಲೆಕ್ಸ್ನಲ್ಲಿ ಮಧ್ಯರಾತ್ರಿಯಿಂದಲೇ ಶೋಗಳನ್ನು ಪಡೆದುಕೊಂಡಿತ್ತು. ಈ ಮೂಲಕ ಕರ್ನಾಟಕದಲ್ಲಿ ಈ ಚಿತ್ರ ಬೃಹತ್ ರೆಕಾರ್ಡ್ ಅನ್ನು ಕ್ರಿಯೇಟ್ ಮಾಡಿತ್ತು. ಹೌದು ಇದುವರೆಗೆ ಯಾವುದೇ ಚಿತ್ರವೂ ಸಹ ಕರ್ನಾಟಕದ ಯಾವುದೇ ಮಲ್ಟಿಪ್ಲೆಕ್ಸ್ ನಲ್ಲಿ ಮಧ್ಯರಾತ್ರಿ ಶೋಗಳನ್ನು ಪಡೆದುಕೊಂಡಿರಲಿಲ್ಲ ಆದರೆ ಚಕ್ರವರ್ತಿ ಸಿನಿಮಾ ರಾತ್ರಿ 12.30 ಕ್ಕೆ ಎರಡು ಶೋ ಮತ್ತು 12.45 ಕ್ಕೆ ಎರಡು ಶೋ ಗಳನ್ನು ಪಡೆದುಕೊಳ್ಳುವುದರ ಮೂಲಕ ಭರ್ಜರಿ ರೆಕಾರ್ಡ್ ಅನ್ನು ಕ್ರಿಯೇಟ್ ಮಾಡಿದೆ. ಇಷ್ಟಕ್ಕೇ ಮುಗಿಯಲಿಲ್ಲ ಈ ಶೋಗಳು ಮುಗಿದ ನಂತರ ಬೆಳಗಿನ ಜಾವ 4 ಗಂಟೆಗೆ ಎರಡು ಶೋ ಮತ್ತು 4.15 ಕ್ಕೆ ಎರಡು ಶೋಗಳನ್ನು ಸಹ ಆಯೋಜಿಸಲಾಗಿತ್ತು.. ಮಧ್ಯರಾತ್ರಿ ಮತ್ತು ಬೆಳಗಿನ ಜಾವ ಎರಡು ಸೇರಿ ಆಯೋಜಿಸಲಾಗಿದ್ದ ಒಟ್ಟು ಎಂಟು ಶೋಗಳು ಸಹ ಹೌಸ್ ಫುಲ್ ಆಗಿದ್ದವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಮೇಲಿದ್ದ ಅಪಾರವಾದ ನಿರೀಕ್ಷೆಯೇ ಈ ರೆಕಾರ್ಡ್ ನಿರ್ಮಾಣವಾಗುವಂತೆ ಮಾಡಿತ್ತು ಎಂಬುದು ಸುಳ್ಳಲ್ಲ.   

short by Pawan / more at Troll haida

Comments