Skip to main content


ದರ್ಶನ್ ಪತ್ನಿಗೆ ಕಿಡಿಗೇಡಿಯಿಂದ ಕಿರುಕುಳ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿಗೆ ಅತೀ ಕೀಳುಮಟ್ಟದಲ್ಲಿ ಅಶ್ಲೀಲ ಶಬ್ದಗಳಿಂದ ಕಿರುಕುಳ ನೀಡಿದ ಘಟನೆ ನಡೆದಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಗೆ ಫೇಸ್‌ಬುಕ್‌ನಲ್ಲಿ ಅಶ್ಲೀಲ ಪದಗಳಿಂದ ನಿಂದಿಸಲಾಗಿದೆ. ವಿಜಯಲಕ್ಷ್ಮಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆಗೆದು, ಆರೋಪಿ ದರ್ಶನ್ ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ತನ್ನ ಫೋಟೋ ಜೊತೆ ದರ್ಶನ್ ಫೋಟೋ ಎಡಿಟ್ ಮಾಡಿ, ಮೈ ವೈಫ್ ಎಂದು ಟ್ಯಾಗ್ ಮಾಡಿದ್ದಾನೆ. ಅಲ್ಲದೇ ಕೀಳುಮಟ್ಟದ ಅಶ್ಲೀಲ ಪದ ಬಳಸಿದ್ದಾನೆ. ಇಷ್ಟೇ ಅಲ್ಲದೇ, ವಿಜಯಲಕ್ಷ್ಮಿಯವರ ಕುಟುಂಬಸ್ಥರ ಫೋಟೋವನ್ನು ಕೂಡ ದುರ್ಬಳಕೆ ಮಾಡಿದ್ದಾನೆ. ಈ ಕುರಿತು ವಿಜಯಲಕ್ಷ್ಮಿ ಸೈಬರ್ ಪೊಲೀಸ್ ಠಾಣೆ ಮೆಟ್ಟಲೇರಿದ್ದು, ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 354(D),354A(1)(iv),(505)(507)(420)ಅಡಿಯಲ್ಲಿ ಕೇಸ್ ದಾಖಲಾಗಿದೆ.      


short by Pawan!

Comments