Skip to main content


ನಾನೇ ಎಂದು ಬೀಗಬೇಡ; ರಾಮಾಯಣ ಓದಿಕೊಂಡ ಆಚಾರ್ಯರು ತಪ್ಪು ಹೇಳಿದ್ದನ್ನ ಕಂಡಿದ್ದೇವೆ!

ನಾನೇ ಎಂದು ಬೀಗಬೇಡ ಸೋತವರನ್ನು ಕಂಡಿದ್ದೇವೆ ! ಬಹುಶಃ ಈ ಮಾತು ಈ ಸಂದರ್ಭದಲ್ಲಿ ಸಮೀರ್ ಆಚಾರ್ಯರಿಗೆ ಒಪ್ಪುತ್ತದೆ. ಕನ್ನಡದ ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಸಮೀರ್ ಆಚಾರ್ಯ ಭಾಗವಹಿಸಿದ್ದರು. ಇದರಲ್ಲಿ ನಿರೂಪಕ ರಮೇಶ್ ಅರವಿಂದ್  ರಾಮಾಯಣದ ಬಗ್ಗೆ ಒಂದು ಪ್ರಶ್ನೆ ಕೇಳುತ್ತಾರೆ. ರಾಮಾಯಣದ ಪ್ರಕಾರ ಶೂರ್ಪನಖಿ ತಾಯಿ ಯಾರು? ಎನ್ನುವ ಪ್ರಶ್ನೆಗೆ ಸಮೀರ್ ಆಚಾರ್ಯ ದಿತಿ ಎನ್ನುತ್ತಾರೆ. ಎರಡೆರಡು ಬಾರಿ  ಕೇಳಿದ ನಂತರ ಆ ಉತ್ತರವನ್ನು ರಮೇಶ್ ಅರವಿಂದ್ ಲಾಕ್ ಮಾಡುತ್ತಾರೆ. ಆಗ ಸಮೀರ್ ಪತ್ನಿ ಬಳಿ ಉತ್ತರ ಕೇಳಿದಾಗ ಅವರು ಕೈಕೇಸಿ ಎನ್ನುತ್ತಾರೆ. ಕೋಪಗೊಂಡ ಆಚಾರ್ಯರು ನಾನು ರಾಮಾಯಣ ಓದಿದೀನಾ? ನೀನು ಓದಿದೀಯಾ ಎಂದು ಗದರುತ್ತಾರೆ. ಕೊನೆಗೆ ಅವರ ಪತ್ನಿಯ ಉತ್ತರವೇ ಸರಿಯಾಗಿರುತ್ತದೆ.     

short by Pawan / more at Suvarna News

Comments