Skip to main content


ಕೆಜಿಎಫ್ ಟ್ರೇಲರ್ ಯಾವಾಗ ರಿಲೀಸ್ ಎಂದು ಕೇಳಿದ ಅಭಿಮಾನಿಗೆ ಯಶ್ ಕೊಟ್ಟ ಉತ್ತರವಿದು..!

ಕೆಜಿಎಫ್.. ಕೆಜಿಎಫ್.. ಯಶ್ ಅಭಿಮಾನಿಗಳಂತು ಶಬರಿಯ ಹಾಗೆ ಕಾದು ಕುಳಿತಿರುವ ಸಿನಿಮಾವಿದು.. ಸತತ ಎರಡು ವರ್ಷಗಳಿಂದ ಯಶ್ ಇದೊಂದು ಸಿನಿಮಾಗಾಗಿ ಬೆವರಿಳಿಸಿದ್ದಾರೆ.. ಈ ಮೂಲಕ ಸಿನಿ ಪ್ರೇಮಿಗಳಲ್ಲಿ ಏನೋ ಇದೆ ಕೆಜಿಎಫ್ ನಲ್ಲಿ ಅಲ್ಲೋ ಕುತೂಹಲವನ್ನ ಉಂಟು ಮಾಡಿದೆ… ಇಷ್ಟು ದಿನ ಈ ರಾಕಿಂಗ್ ಸ್ಟಾರ್ ಗಡ್ಡದ ಮೇಲಿದ್ದ ಪೂರ್ಣ ಗಮನ ಸೀದಾ ಸಿನಿಮಾ ಟ್ರೇಲರ್ ಮೇಲೆ ಹೋಗಿದೆ.. ಹೀಗಾಗೆ ಯಶ್ ಎಲ್ಲೆ ಹೋದ್ರು, ಎಲ್ಲೆ ಬಂದ್ರು, ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡ್ರು ಅಭಿಮಾನಿಗಳು ಕೇಳೋದೊಂದೆ ಪ್ರಶ್ನೆ ಕೆಜಿಎಫ್ ಸಿನಿಮಾ ಟ್ರೇಲರ್ ರಿಲೀಸ್ ಯಾವಾಗ ಬಾಸ್ ಅಂತ… ಸದ್ಯ ಹೀಗೆ ಫೇಸ್ ಬುಕ್ ನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಯಶ್ ಸದ್ಯಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ.. ಹೌದು ಸೆಪ್ಟೆಂಬರ್ ನಲ್ಲಿ ಕೆಜಿಎಫ್  ಒಂದರ ಟ್ರೇಲರ್ ನಿಮ್ಮೆದುರಿಗೆ ಬರಲಿದೆ ಅಂತ ಸ್ವತಃ ಯಶ್ ಹೇಳಿದ್ದಾರೆ….   

short by Pawan!

Comments