Skip to main content


EXCLUSIVE: ಕೆಜಿಎಫ್ ಚಿತ್ರದ, ನೀವು ಎಲ್ಲೂ ಕೇಳಿರದ 9 ಸ್ಪೆಷಲ್ ಮಾಹಿತಗಳು!

* ಶ್ರಮಣ್ ಜೈನ್

ಸದ್ಯ ನೀವು ಯಾವುದೇ ಕನ್ನಡ ಚಿತ್ರ ಪ್ರೇಮಿಯನ್ನ ಯಾವ ಕನ್ನಡ ಚಿತ್ರಕ್ಕಾಗಿ ಕಾಯುತ್ತಿದ್ದೀರ ಎಂದು ಕೇಳಿದಾಕ್ಷಣ, ಕಣ್ಣು ಮುಚ್ಚಿ ಅವರು ಹೇಳುವ ಚಿತ್ರ "K.G.F."

ಹೌದು, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ "K.G.F." ಚಿತ್ರ ಸದ್ಯ ಭಾರತ ಚಿತ್ರರಂಗವೇ ಎದುರು ನೋಡುತ್ತಿರುವ ಚಿತ್ರ. ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ರವಿ ಬಸ್ರೂರ್ ಅವರ ಹಿನ್ನಲೆ ಸಂಗೀತ, ಮತ್ತು ಭುವನ್ ಗೌಡ ಅವರ ಛಾಯಾಗ್ರಹಣವಿದೆ. ಸರಿ ಸುಮಾರು 2 ವರ್ಷಗಳಿಂದ ತಯಾರಾಗುತ್ತಿರುವ ಚಿತ್ರವನ್ನು "ಹೊಂಬಾಳೆ ಫಿಲ್ಮ್ಸ್" ಅವರು ನಿರ್ಮಿಸುತ್ತಿದ್ದಾರೆ. 

ಚಿತ್ರಕ್ಕಾಗಿ ಯಶ್ ಅವರು ಬಿಟ್ಟಿರುವ ಗಡ್ಡ, ಕೇಶ ರಾಶಿ, ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್, ಟೀಸರ್ ಇವೆಲ್ಲ ಚಿತ್ರದ ಮೇಲಿರುವ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ನಿರೀಕ್ಷೆಗಳನ್ನ ಇನ್ನಷ್ಟು ಇಮ್ಮಡಿಗೊಳಿಸಲು ನಾವು ನಿಮಗೋಸ್ಕರ ಚಿತ್ರದ ಬಗೆಗಿನ ನೀವು ಕೇಳಿರದ ವಿಶೇಷ ಮಾಹಿತಿಗನ್ನು ಕೆಳಗೆ ನೀಡಿದ್ದೀವಿ. ನಿಮ್ಗೆ ಖಂಡಿತಾ ಇಷ್ಟ ಆಗುತ್ತೆ, ಹಾಗಾಗಿ ತಪ್ಪದೇ ಶೇರ್ ಮಾಡಿ, ನಮ್ಮ ಒಂದು ಸಣ್ಣ ಪ್ರಯತ್ನಕ್ಕೆ ಪ್ರೋತ್ಸಾಹಿಸಿ..

೧. ಕೆ. ಜಿ. ಎಫ್ ಚಿತ್ರದ ಪರಿಕಲ್ಪನೆ ಶುರುವಾಗಿದ್ದು ಗೂಗ್ಲಿ ಚಿತ್ರದ ಮೂಲಕ!

ಪ್ರಶಾಂತ್ ನೀಲ್ ಅವರು ಕೆ. ಜಿ. ಎಫ್ ಅಂತಹ ದೊಡ್ಡ ಚಿತ್ರಕ್ಕೆ ಕೈ ಹಾಕಲು ಗೂಗ್ಲಿ ಚಿತ್ರವೇ ಕಾರಣವಂತೆ. ಅಂದ್ರೆ, ಗೂಗ್ಲಿ ಚಿತ್ರದಲ್ಲಿನ ಯಶ್ ಅಭಿನಯವನ್ನು ನೋಡಿ, ಕೆ. ಜಿ. ಎಫ್ ಅಂತಹ ಚಿತ್ರವನ್ನು ಮಾಡಿದರೆ, ಯಶ್ ಅವರಿಗೆ ಮಾತ್ರ ಚಿತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂಬ ಭಾವನೆ ಪ್ರಶಾಂತ್ ಅವರಿಗೆ ಮೂಡಿತ್ತು. ಈ ಕಾರಣದಿಂದ ಧೈರ್ಯವಾಗಿ ಕೆ. ಜಿ. ಎಫ್ ಚಿತ್ರವನ್ನು ಮಾಡಲು ಪ್ರಶಾಂತ್ ಅವರು ಮುಂದಾಗಿದ್ದು.

೨. ನೈಜ ಘಟನೆ ಆಧಾರಿತ ಚಿತ್ರ ಕೆ. ಜಿ. ಎಫ್!

ಕೆ. ಜಿ. ಎಫ್ ಚಿತ್ರದ ಸ್ಟೋರಿಗೆ ಪ್ರಮುಖ ಅಡಿಪಾಯ 1970ರ, ಕೋಲಾರದ ಒಬ್ಬ ರೌಡಿಯ ಲೈಫ್ ಸ್ಟೋರಿ. ಈ ಕಥೆ ಬಗ್ಗೆ ಸೊಂಶೋಧನೆಯನ್ನು ಮಾಡಲು ಪ್ರಶಾಂತ್ ನೀಲ್ ಮತ್ತು ತಂಡ ತೆಗೆದುಕೊಂಡ ಸಮಯ ಒಂದೂವರೆ ವರ್ಷ. ಇನ್ನು 1970ರ ವಾತಾವರಣವನ್ನು ಚಿತ್ರದಲ್ಲಿ ತೋರಿಸಲು ಚಿತ್ರತಂಡ ಸಾಕಷ್ಟು ಶ್ರಮ ಪಟ್ಟಿದೆ, ಮತ್ತು ಸಿಕ್ಕಾಪಟ್ಟೆ ಖರ್ಚನ್ನೂ ಮಾಡಿದೆ. ಸ್ಯಾಂಡಲ್ವುಡ್ ನಲ್ಲಿ ಇಲ್ಲಿಯವರೆಗೆ ಚಿತ್ರದ ಸೆಟ್ ಒಂದಕ್ಕೆ ಇಷ್ಟೊಂದು ಹಣವನ್ನ ಖರ್ಚು ಮಾಡಿದ ಹೆಗ್ಗಳಿಕೆ "ಕೆ. ಜಿ. ಎಫ್" ಗೆ ಸಲ್ಲುತ್ತದೆ.

೩. ಹೌದು! ಕೆ. ಜಿ. ಎಫ್ "ಬಿಗ್" ಬಜೆಟ್ ಮೂವಿ!

"ಸಂತು ಸ್ಟ್ರೇಟ್ ಫಾರ್ವಾರ್ಡ್" ಚಿತ್ರದ ನಂತರ ತನ್ನ ಅಭಿಮಾನಿಗಳಿಗೆ ಯಾವುದೇ ಚಿತ್ರವನ್ನ ನೀಡಿಲ್ಲ. ಸರಿ ಸುಮಾರು ಎರಡೂವರೆ ವರ್ಷಗಳಿಂದ ಕೆ. ಜಿ. ಎಫ್ ಚಿತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಒಮ್ಮೆ ಊಹೆ ಮಾಡಿ, ಚಿತ್ರ ಯಾವ ಮಟ್ಟದಲ್ಲಿ ತಯಾರಾಗುತ್ತಿದೆ ಅಂತ. ಹೀಗಾಗಿ, ನಿರ್ಮಾಪಕರು ಹಣ ಇನ್ವೆಸ್ಟ್ ಮಾಡೋ ವಿಷಯದಲ್ಲಿ ಯಾವುದೇ ರಾಜಿ ಮಾಡಿಲ್ಲ. ಮೂಲಗಳ ಪ್ರಕಾರ, ಕೆ. ಜಿ. ಎಫ್ ಚಿತ್ರದ ಒಟ್ಟಾರೆ ಬಜೆಟ್ 50ಕೋಟಿ ಅಂತೆ.

೪. ಕೆ. ಜಿ. ಎಫ್ -> ಗಡ್ಡ ❤️

ಯಶ್ ಅವರು ಚಿತ್ರಕ್ಕಾಗಿ ಗಡ್ಡ ಬಿಟ್ಟಿರುವುದು ನಿಮಗೆಲ್ಲ ಗೊತ್ತಿರುವ ವಿಷಯವೆ. ಆದ್ರೆ, ಸ್ಪೆಷಲ್ ಮಾಹಿತಿ ಏನಂದ್ರೆ ಯಶ್ ಜೊತೆ ಚಿತ್ರಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರು ಗಡ್ಡ ಬಿಟ್ಟವರೇ. ತಮಾಷೆ ಅಂದ್ರೆ ರೋಡ್ ನಲ್ಲಿ ಯಾರೇ ಉದ್ದ ಗಡ್ಡ ಬಿಟ್ಟುವರನ್ನ ತಂಡದವರು ನೋಡಿದ್ರೆ, ಅವರನ್ನ ನೇರವಾಗಿ ಚಿತ್ರದ ಭಾಗವಾಗಿಸುತ್ತಿದ್ದರು. ಇವರ ಈ ಕೆಲಸದಿಂದ ಪಾಪ ಸೆಲೂನ್ ಅವರಿಗೆ ಎಷ್ಟು ಲಾಸ್ ಆಗಿದ್ಯೋ ಏನೋ.. 😂

೫. ಪ್ರಮುಖ ತಾರಾಗಣದಲ್ಲಿ ಇರಲಿದ್ದಾರೆ 15 ಫೇಮಸ್ ನಟರು

ಚಿತ್ರದಲ್ಲಿ ನೀವು ಪ್ರಮುಖ ನಟರುಗಳಾದ ಯಶ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ನಾಝಿರ್, ರಮ್ಯಾ ಕೃಷ್ಣ, ಅನಂತ್ ನಾಗ್, ವಸಿಷ್ಠ ಸಿಂಹ, ಅಯ್ಯಪ್ಪ ಶರ್ಮ, ಬೀಸು ಸುರೇಶ್, ಶ್ರೀನಿವಾಸ್ ಮೂರ್ತಿ, ರಾಮಚಂದ್ರ, ಬಿ. ಎಸ್. ಅವಿನಾಶ್, ವಿನಯ್ ಬಿಡ್ಡಪ್ಪ, ಪುನೀತ್ ಗೌಡ, ಮತ್ತಿನ್ನಿತರರು.

೬. ಚಿತ್ರದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಗೆ ಹೆಚ್ಚು ಒತ್ತು!

ಉಗ್ರಂ ಚಿತ್ರಕ್ಕೆ ಜಬರ್ದಸ್ತ್ ಹಿನ್ನಲೆ ಸಂಗೀತ ನೀಡಿದ್ದ ರವಿ ಬಸ್ರೂರ್ ಅವ್ರೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಚಿತ್ರದ ಮ್ಯೂಸಿಕ್ ಬಗ್ಗೆ ನೀವು ಸಿಕ್ಕಾಪಟ್ಟೆ ನಿರೀಕ್ಷೆಗಳನ್ನ ಇಟ್ಟುಕೊಳ್ಳಲೇಬೇಕು. ವಿಶೇಷ ಏನಪ್ಪಾ ಅಂದ್ರೆ, ‘ಕೆ.ಜಿ.ಎಫ್.’ ಚಿತ್ರದ ಬ್ಯಾಗ್ರೌಂಡ್ ಸೌಂಡ್ ಎಫೆಕ್ಟ್ ಗಾಗಿ ಹಾಲಿವುಡ್ ಕಂಪನಿಗಳ ಸೇವೆಯನ್ನು ಬಳಸಿಕೊಳ್ಳಲಾಗ್ತಿದೆ.

೭. ಇಡೀ ಚಿತ್ರತಂಡಕ್ಕೆ ವಿಮೆ ಮಾಡಿಸಿರುವ ಕನ್ನಡದ ಏಕ ಮಾತ್ರ ಚಿತ್ರ "ಕೆ. ಜಿ. ಎಫ್"

ಅನಿಲ್ ಮತ್ತು ಉದಯ್ ಅವರ ಅಕಸ್ಮಾತ್ ಸಾವು ಎಲ್ಲರಿಗೂ ಬೇಸರದ ಜೊತೆಗೆ ಶಾಕ್ ಆಗಿತ್ತು. ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡ "ಕೆ. ಜಿ. ಎಫ್." ಚಿತ್ರತಂಡ, ಚಿತ್ರಕ್ಕಾಗಿ ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೂ ವಿಮೆ ಮಾಡಿಸಿತು. ಇದರ ಕುರಿತು ಮೀಡಿಯಾ ಜೊತೆ ಮಾತಾಡಿದ ರಾಕಿಂಗ್ ಸ್ಟಾರ್, "It is Important to have the security in the place where we shoot, regarding this, I spoke to our Producer. Everyone’s life is precious to us. So, we have taken this step. While we are spending crores on the movie, it becomes equally important to spend some money on insurance. It would be great if this is made a mandatory practice in Kannada Film Industry," ಎಂದರು. ಯಶ್ ಅವರ ಈ ಮುಂದಾಲೋಚನೆಗೆ ಮತ್ತು ಸತ್ಕಾರ್ಯಕ್ಕೆ ನಮ್ಮದೊಂದು ಸಲಾಂ.

೮. ದೊಡ್ಡ ಮೊತ್ತದ ಸಂಭಾವನೆ ಪಡೆದ ಯಶ್! He deserves it!

ಮೂಲಗಳ ಪ್ರಕಾರ ಯಶ್ "ಕೆ. ಜಿ. ಎಫ್" ಚಿತ್ರತಂಡದಿಂದ ಪಡೆದ ಸಂಭಾವನೆ ಬರೋಬ್ಬರಿ 8ಕೋಟಿ ಅಂತೆ. ಆದ್ರೆ ಬೃಹತ್ ಮೊತ್ತದ ಸಂಭಾವನೆಗೆ ಯಶ್ ಅರ್ಹರು. ಸಿಕ್ಕ ಎಲ್ಲಾ ಚಿತ್ರಗಳನ್ನ ಮುಂದೂಡಿ ಬರೀ ಈ ಚಿತ್ರಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ಯಶ್ ಅವರಿಗೆ, ಅದೇ ರೀತಿ ಇಡೀ ಚಿತ್ರತಂಡಕ್ಕೆ ಹಾಟ್ಸ್ ಆಫ್!!

೯. ಕೆ. ಜಿ. ಎಫ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ಚಿತ್ರತಂಡದಿಂದ ಸದ್ಯ ಬರುತ್ತಿರುವ ಮಾಹಿತಿಯ ಪ್ರಕಾರ ಈ ಚಿತ್ರ ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಶೀಘ್ರದಲ್ಲೇ ಟ್ರೈಲರ್ ಬಿಡುಗಡೆಯಾಗಲಿದೆ. ಡಿಸೆಂಬರ್ ನಲ್ಲಿ ರಾಕಿಂಗ್ ಸ್ಟಾರ್ ಗೆ ಡಬಲ್ ಧಮಾಕ, ಯಾಕೆ ಕೇಳ್ತೀರಾ!? ಅದೇ ಡಿಸೆಂಬರ್ ನಲ್ಲಿ ಜೂನಿಯರ್ ರಾಕಿಂಗ್ ಸ್ಟಾರ್ ಆಗಮನವಾಗಲಿದೆ.

ಈ ಮಾಹಿತಿಗಳನ್ನು ನಿಮ್ಮ ಫ್ರೆಂಡ್ಸ್ ಗಳಿಗೂ ತಲುಪಿಸಬೇಕು ಅನ್ಕೊಂಡಿದ್ರೆ, ತಪ್ಪದೇ ಶೇರ್ ಮಾಡಿ, ಅವರನ್ನ ಟ್ಯಾಗ್ ಮಾಡಿ.

ಧನ್ಯವಾದಗಳು!!

Comments